ಪೀಲ್‍ನಾಕ್, ಬರೀಸ್
1894-1837 ? ರಷ್ಯನ್ ಕಾದಂಬರಿಕಾರ ಬರೀಸ್ ಆ್ಯಂಡ್ರಿಯೆವಿಚ್ ವೋಗನ ಕಾವ್ಯನಾಮ. ರಷ್ಯದ ಮಹಾಕ್ರಾಂತಿಯ ಹಾಗೂ ಅದಕ್ಕೆ ಹಿಂದಿನ ರಷ್ಯದ ಜೀವನವನ್ನು ಕುರಿತಂತೆ ಈತ ದಿ ನೇಕೆಡ್ ಯಿಯರ್ (1922), ಮಹೋಗನಿ (1927), ದಿ ವೋಲ್ಗ್ ಫಾಲ್ಸ ಇನ್‍ಟು ದಿ ಕ್ಯಾಸ್ಟಿಯನ್ ಸೀ (1930)-ಈ ಮೂರು ಕಾದಂಬರಿಗಳನ್ನು ಬರೆದಿದ್ದಾನೆ. ಈತನ ಓಕೆ (1932) ಎಂಬ ಪುಸ್ತಕ ತಾನು ಕೈಗೊಂಡ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಪ್ರವಾಸವನ್ನು ಯಾವ ಹೊಗಳಿಕೆಯೂ ಉತ್ಪ್ರೇಕ್ಷೆಯೂ ಇಲ್ಲದಂತೆ ಚಿತ್ರಿಸುತ್ತದೆ. ನಗರಗಳ ಅತಿಯಾದ ಬೆಳವಣಿಗೆಯನ್ನು ಅತಿಯಾದ ಯಾಂತ್ರೀಕರಣವನ್ನು ಈತ ವಿರೋಧಿಸಿದ.
(ಎಲ್.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ